Pages

Monday, April 30, 2012

kannada in computer

ಬರೆಯಲು ಹೋದರೆ ಪೆನ್ನು ಕೈ  ಕೆಲಸ ಮಾಡುವುದಿಲ್ಲವೆಂಬ ಭಯ ಇಲ್ಲಿ ಇಲ್ಲ! ಏಕೆಂದರೆ ನಾನು ಬಳಸುತ್ತಿರುವುದು ಕಂಪ್ಯೂಟರ್ ಕೀ ಬೋರ್ಡ್!
ಇದರ ಉಪಯೋಗ ನಾನು ೧೯೯೩ರಿದಲೋ ಮಾಡುತ್ತಿದ್ದೇನೆ. ನನಗೆ ತಿಳಿದಿರುವ ಹಾಗೆ ಕನ್ನಡದಲ್ಲಿ ಬಂದ ಮೊದಲ ಸಾಫ್ಟ್ ವೇರ್ ಮಯೂರ ಮಾಸಿಕದ ಕಚೇರಿಯಲ್ಲಿ ನಾನು ಕಂಡಿದ್ದೆ. ಆಗಿನಿಂದ ಕನ್ನಡ ತಂತ್ರಾಂಶವನ್ನು ಉಪಯೋಗಿಸುವ ಅಭಿಲಾಷೆ ಮೂಡಿತ್ತು.
ಸೀಡ್ಯಾಕ್ ಕಂಪೆನಿಯವರು ಎಂಟು ಭಾಷೆಯ ಲಿಪಿಯನ್ನು ಹೊರತಂದಿದ್ದು ನಾನದನ್ನು ೧೯೯೩ರಲ್ಲಿ ಕೊಂಡೆ. 
ಇಲ್ಲಿಯವರೆಗೆ ಯಾರೂ ಕೀ ಬೋರ್ಡನ್ನು ಫೋನೆಟಿಕ್ಸ್ ಬಳಸಿ ಮಾಡಿರಲಿಲ್ಲ. ಅಂದರೆ ನಾವು ಒಂದು ಶಬ್ದವನ್ನು ಹೇಗೆ ಉಚ್ಚಾರಣೆ ಮಾದುವೆವೋ ಅದರಂತೆ ಕೀಲಿ ಮಣೆ ತಯಾರಿ ಆಗಿತ್ತು.
ಒಂದು ಭಾಷೆಯಲ್ಲಿ ಬರೆದು ಮತ್ತೊಂದರಲ್ಲಿ ನೋಡುವುದು ಒಂದು ಆಟವಾಗಿತ್ತು ಆಗೆಲ್ಲಾ!
ಓಹೋ, ಇದೆ ರೀತಿ ಲತಾ ಮಂಗೇಶ್ಕರ್ ಮಲೆಯಾಲವನ್ನು ಹಿಂದಿಯಲ್ಲಿ ಬರೆದುಕೊಂಡು ಹಾಡಿದರೆನೋ ದಿಲ್ ಸೆ ಚಿತ್ರದಲ್ಲಿ !
ಬರೆಯುತ್ತಾ ಬರೆಯುತ್ತಾ ನನ್ನ ವೇಗವೂ ಹೆಚ್ಚಿತ್ತು.
ನಂತರ ಬಂದದ್ದು ಬರಹ.  ಇದು ಅಮೆರಿಕಾದಲ್ಲಿ ಬಾಳುತ್ತಿರುವ ಕನ್ನಡ ಬರುವ ತಾಯ್ತಂದೆಯರ ಕನ್ನಡ ಬರದ ಮಕ್ಕಳಿಗಾಗಿಯೇ ತಯಾರಿಸಿದ ಹಾಗಿತ್ತು.
ಇದು ಕೂಡಾ ಫೋನೆಟಿಕ್ಸ್  ಆಧಾರ  ಪಡೆದಿತ್ತು.
ನುಡಿ ಇವೆರಡಕ್ಕಿಂತ ಸ್ವಲ್ಪ ಭಿನ್ನ.
ಇದಕ್ಕೆ ಕನ್ನಡ ಟೈಪ್ ರೈಟರ್ ರೀತಿಯ ಕೀಲಿ ಮಣೆ ಹೊಂದಿದೆ.
ಮೊದಲಿಗಿಂತ ಈಗ ಹೆಚ್ಚು ಆಪ್ಶನ್ ಇವೆ.
ನನಗೆ ಎಲ್ಲವೂ ಅಭ್ಯಾಸ ಆಗಿವೆ.
ಅದರ ಪ್ರಯತ್ನವೇ ಈ ಲೇಖನ!


No comments:

Post a Comment